
27th April 2025
ಶಹಾಪುರ:ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ನೇಮಗೊಂಡು ಯಾರ ಸಹಕಾರಗಳಿಲ್ಲದೆ ದೇಶ ವಿದೇಶಗಳಲ್ಲಿ ಅಭ್ಯಾಸ ಮಾಡಿ ಪಾಂಡತ್ಯವನ್ನು ಪಡೆದುಕೊಂಡು ಭಾರತ ದೇಶಕ್ಕೆ ವಿಶ್ವಕ್ಕೆ ಮಾದರಿಯದ ಸಂವಿಧಾನ ನೀಡಿ ಸರ್ವ ಶ್ರೇಷ್ಟರೆನಿಸಿದ್ದಾರೆ, ಅವರ ಹಾದಿಯಲ್ಲಿ ಇಂದು ಭಾರತ ಮುನ್ನಡೆಯುತ್ತಿದ್ದು, ಪ್ರತಿಯೊಬ್ಬರು ಡಾ.ಬಿ,ಆರ್,ಅಂಬೇಡ್ಕರವರ ಆದರ್ಶಗಳು ಸರ್ವರು ಅರ್ಥೈಹಿಸಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕಾ ಸಾರ್ವಜನಿಕ ಉಧ್ಯಮಗಳ ಮಂತ್ರಿಗಳಾದ ಶರಣಬಸ್ಸಪ್ಪಗೌಡ ದರ್ಶನಾಪುರವರು ಕರೆ ನೀಡಿದರು, ಅವರು ತಾಲುಕಿನ ರಸ್ತಾಪುರ ಗ್ರಾಮದಲ್ಲಿ ಡಾ,ಬಾಬಾಸಾಹೇಬ್ ಅಂಬೇಡ್ಕರವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು, ಶೈಕ್ಷಣಿಕ, ರಾಜಕೀಯ, ಮತ್ತು ಸಾಮಾಜಿಕವಾಗಿ ಬೇಳೆಯಲು ಶಿಕ್ಷಣಕ್ಕೆ ಹೆಚ್ಚು ಆಸಕ್ತಿ ನೀಡಬೇಕು, ಕಲಂ, ೩೭೧ ಜೆ ಜಾರಿಗೆ ತಂದು ಕಲ್ಯಾಣ ಕರ್ನಾಟಕಕ್ಕೆ ಕೊಡುಗೆ ನೀಡಿದ, ಎಐಸಿಸಿ ಅಧ್ಯಕ್ಷರಾದ ಡಾ, ಮಲ್ಲಿಕಾರ್ಜುನ ಖರ್ಗೆಯವರ ಕಾರ್ಯ ಶ್ಲಾಘನೀಯವಾಗಿದ್ದು ಇಂದು ಹಿಂದುಳಿದ ಹೈದ್ರಬಾದ ಕರ್ನಾಟಕ ವಿಭಾಗಕ್ಕೆ ಉದ್ಯೋಗ ಮತ್ತು ಶೈಕ್ಷಣಿಕವಾಗಿ ಶಕ್ತಿಯಾಗಿ ನೀಡಿದ್ದಾರೆ, ಎಂದ ಸಚಿವ ದರ್ಶನಾಪುರ ನುಡಿದರು, ಜಯಂತಿ ಉತ್ಸÀವಗಳು ಕೇವಲ ಕಾಟಚಾರಕ್ಕೆ ಸೀಮಿತವಾಗಬಾರದು ಅತ್ಯಂತ ಹಿಂದೆ ಉಳಿದ ಸಮಾಜದ ಕುಟುಂಬಗಳಿಗೆ ಪರಸ್ಪರ ಸಹಕಾರ ನೀಡಿ ಶೈಕ್ಷಣಿಕವಾಗಿ ಮುಂದೆ ಸಾಗಿಸಬೇಕು,ಅಂತರಿಕ ಕಲಹಗಳನ್ನು ಮರೆತು ಸಮಾಜಿಕ ಅಭ್ಯುಧ್ಯಯಕ್ಕೆ ಮುಂದಾಗಿ ನಿಲ್ಲಬೇಕು ಎಂದು ಅವರು ತಿಳಿಸಿದರು, ಪೂಜ್ಯ ಮೆಂತಪಾಲ ಬಂತೇಜೀಯರು ಹಾಗೂ ಪರಮಪೂಜ್ಯ ಶ್ರೀ ಶರಭಯ್ಯ ಮಾಹಾಸ್ವಾಮೀಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಶರಬಣ್ಣಗೌಡ ಮಾ,ಪಾಟೀಲ, ಅಭ್ರಣ್ಣ ಸಾಹು. ಶರಬಣ್ಣ ಸಾಹು, ನಾಗಣ್ಣ ಪೂಜಾರಿ,ಹಯ್ಯಾಳಪ್ಪ ಟಣಿಕೆದಾರ, ನಾಗಣಗೌಡ ಪಾಟೀಲ್, ಗ್ರಾ,ಪಂ, ಅಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಜೇಗಿರಿ ತಾಲುಕಾ ಡಾ,ಬಿ,ಆರ್,ಅಂಬೇಡ್ಕರ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ರಸ್ತಾಪುರ, , ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾದ ಶಿವಮಾಂತಪ್ಪ ಸಾಹು ದಲಿತ ಮುಖಂಡರಾದ ನೀಲಕಂಠ ಬಡಿಗೇರ, ಮಲ್ಲಪ್ಪ ಗೋಗಿ, ಶ್ರೀಶೈಲ್ ಹೊಸಮನಿ, ಮಲ್ಲಿಕಾರ್ಜುನ ಪೂಜಾರಿ ಶಿವುಪುತ್ರ ಜವಳಿ, ನಾಗಣ್ಣ ಬಡಿಗೇರ.ಸೇರಿದ್ದಂತೆ ಅನೇಕರು ಹಾಜರಿದ್ದರು, ಸಮಾರಂಭದ ಅಧ್ಯಕ್ಷತೆಯನ್ನು ಭೀಮರಾಯ ಜೇಗಿರಿ ವಹಿಸಿದ್ದರು, ಗೌರವಾಧ್ಯಕ್ಷರಾದ ಚಂದ್ರಕಾAತ ಬಜೇರಿ, ಕಾಯಾಧ್ಯಕ್ಷರಾದ ಸಂತೋಷ ಮೆತ್ರಿ, ಮಾನಪ್ಪ ಜೇಗಿರಿ, ರಾಘವೇಂದ್ರ ದೇವಿಕೇರಿ, ಅಯ್ಯಪ್ಪ ಕೊಂಬಿನ,ಬಸವರಾಜ ಅಯ್ಯಪ್ಪನೋರ್. ಶರಬಣ್ಣ ಕಜ್ಜಾ ವಿವಿ಼ಧ ಸಮಿತಿಗಳ ಅಧ್ಯಕ್ಷರು ಪಧಾಧಿಕಾರಿಗಳು ಪಾಲ್ಗೊಂಡಿದ್ದರು,ಭೀಮಾಶAಕರ್ ಅಯ್ಯಪನೋರ್ ಸರ್ವರನ್ನು ಸ್ವಾಗತಿಸಿದರು, ಭೀಮರಾಯ ಜೇಗ್ರಿರಿ ಕಾರ್ಯಕ್ರಮ ನೀರೂಪಿಸಿದರು, ಮಲ್ಲಿಕಾರ್ಜುನ ಆರಬೋಳ ವಂದಿಸಿದರು,
ತಾಲುಕಾ ಕೇಂದ್ರ ಸ್ಥಳದಲ್ಲೆ ಆಯಕಟ್ಟಿನ ಜಾಗದಲ್ಲಿ ಡಾ,ಬಾಬಾಸಾಹೇಬರ ಮೂರ್ತಿ ಪ್ರತಿಸ್ಥಾಪನೆಗೆ ಸಿದ್ದವಾಗಿದ್ದು ಮುಂದಿನ ದಿನಗಳಲ್ಲಿ ಎಐಸಿಸಿ ರಾಷ್ಟಿçÃಯ ಅಧ್ಯಕ್ಷರಾದ ಡಾ, ಮಲ್ಲಿಕಾರ್ಜುನ ಖರ್ಗೆಜೀಯವರುನ್ನು ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಹಾಗೂ ಡಾ,ಎಚ್,ಸಿ,ಮಾಹಾದೇವಪ್ಪನವರನ್ನು ಅಹ್ವಾನಿಸಿ ಹಳೆ ಬಸ್ ನಿಲ್ದಾಣದಲ್ಲಿ ಡಾ,ಬಿ,ಆರ್,ಅಂಬೇಡ್ಕರವರ ಪ್ರತಿಮೆ ಲೋಕಾರ್ಪಣೆ ಮಾಡಲಾಗುತ್ತದೆ, ಕಾನೂನಾತ್ಮಕವಾಗಿ ೧೪ ತಿಂಗಳ ಕಾಲ ಸತತ ಪ್ರತಯತ್ನಗಳಿಂದ ಸಚಿವ ಸಂಪುಟದಲ್ಲಿ ಚರ್ಚಿಸಿ, ನ್ಯಾಯಸಮ್ಮತವಾಗಿ ಅವಕಾಶ ಕಲ್ಪಿಸಿಕೊಡಲಾಯಿತು, ಈ ದಿಸೆಯಲ್ಲಿ ದಲಿತ ಮುಖಂಡರ ಪ್ರಯತ್ನಗಳು ಮರೆಯಲಾಗದು, ಶಿಘ್ರದಲ್ಲೆ ಪ್ರತಿಮೆ ಅನಾವರಣಕ್ಕೆ ಸಜ್ಜುಗೊಳಿಸಲಾಗುತ್ತದೆ.
ಶರಣಬಸ್ಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕಾ ಸಾರ್ವತ್ರಿಕ ಉದ್ಯಮಗಳ ಮಂತ್ರಿಗಳು
ವಿಶ್ವ ಮಲೇರಿಯಾ ದಿನ ಜಾಗೃತಿ ಜಾಥಾ ಕಾರ್ಯಕ್ರಮ ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ ಮಲೇರಿಯಾದಿಂದ ಮುಕ್ತರಾಗಿ